Tuesday, January 24, 2012

Call to Kannadigas to Volunteer as Trainers


Kannada Parichaya varg - 2012

ನಮಸ್ಕಾರ, ಕನ್ನಡ ಭಾಷೆಯ ಬಳಕೆಯನ್ನು ಹೆಚ್ಚಿಸಲು ಕನ್ನಡ ಪ್ರೇಮಿಗಳಿಗೆ ಒಂದು ಸದವಕಾಶ!

ಹೊರ ರಾಜ್ಯ ದಿಂದ ಬಂದ, ಕನ್ನಡದಲ್ಲಿ ಸಂಭಾಷಣೆ ನಡೆಸಲು ಇಚ್ಛೆಯಿರುವ ಕನ್ನಡೇತರರಿಗೆ ಕನ್ನಡ ಕಲಿಯಲು ಅವಕಾಶ ಮಾಡಿಕೊಡುವ ಒಂದು ಸಣ್ಣ ಪ್ರಯತ್ನ ನಡೆಯುತ್ತಿದೆ. ಬೆಂಗಳೂರಿನಾದ್ಯಂತ ಎರಡು ದಿನಗಳ ಕಾಲ 300 ಕ್ಕೂ ಮೇಲ್ಪಟ್ಟು ಕನ್ನಡ ಪರಿಚಯ ವರ್ಗಗಳನ್ನು(ಉಚಿತವಾಗಿ)ನಡೆಸುವ ಯೋಜನೆಯ ಸಿದ್ಧತೆ ನಡೆಯುತ್ತಿದೆ. ಕನ್ನಡ ಸಂಭಾಷಣೆಯ ಪರಿಣತಿಯನ್ನು ಹೆಚ್ಚಿಸುವ ಇಚ್ಛೆಯನ್ನು ಕೇಂದ್ರವಾಗಿಟ್ಟುಕೊಂಡು ಪಾಠ ಮಾಡಲು ಶಿಕ್ಷಕರನ್ನು ನೋಂದಾಯಿಸುವ ಪ್ರಕ್ರಿಯೆ ನಡೆಯುತ್ತಿದೆ.

ಕನ್ನಡ ಪರಿಚಯ ವರ್ಗ: 11 ಮತ್ತು 12 Feb (ಶನಿವಾರ, ಭಾನುವಾರ) 2 pm to 6 pm (ಒಂದು ದಿನಕ್ಕೆ 4 ಘಂಟೆಗಳ ಅವಧಿ)

ಈ ವರ್ಗಕ್ಕೆ ತಾವುಗಳು ಶಿಕ್ಷಕರಾಗಿ ಬರಲು ಈ ಮೂಲಕ ಆಹ್ವಾನ ನೀಡಲಾಗುತ್ತಿದೆ. ಶಿಕ್ಷಕರಿಗೆ ತರಬೇತಿ - Train the Trainers (3T) ಹಮ್ಮಿಕೊಳ್ಳಲಾಗಿದೆ. ಎಲ್ಲ ವರ್ಗಗಳಲ್ಲಿ ಸಮಾನವಾದ ಪಠ್ಯಕ್ರಮದ ಬಳಕೆ ಆಗಬೇಕೆಂಬ ದೃಷ್ಟಿಯಿಂದ ಈ ಪೂರ್ವಸಿದ್ಧತಾ ತರಬೇತಿ ಆಯೋಜಿಸಲಾಗಿದೆ.

ಶಿಕ್ಷಕರ ಅರ್ಹತೆ: ಕನ್ನಡ ಭಾಷೆಯನ್ನು ಮಾತನಾಡಲು, ಓದಲು ಬರುವಂತಹವರು.

ಮಾಹಿತಿ: ಈ ವರ್ಗದಲ್ಲಿ ಕೇವಲ ಕನ್ನಡ ಸಂಭಾಷಣೆಯ ಪರಿಣತಿಯನ್ನು ಹೆಚ್ಚಿಸುವ ಅಂಶಗಳತ್ತ ಮಾತ್ರ ದೃಷ್ಟಿ ಹರಿಸಲಾಗಿದೆ. ಭಾಷಾ ಕಲಿಕೆಯ ಇನ್ನಿತರ ಅಂಶಗಳನ್ನು ಈ ವರ್ಗದ ಪರಿಧಿಗೆ ಒಳಪಡಿಸಲಾಗಿಲ್ಲ.

Please contact us if you are a Kannadiga and interested in training non-Kannadigas and / or if you know a Kannadiga who would voluteer.

Contact Name: ___________________ Contact Number; ____________________

2 comments:

  1. Raghavendra Kulkarniyavarige Namaskaara.
    Eegashte KPV training bagge thiliyithu.
    Kannada Bhaasheyannu ulisi belesuva KPV prayathnakke Dhanyvaadagalu matthu
    heege saagali emba haaraikegalu.
    Naanu Bengalooru nivaasi haagu naanu saha Feb 11 & 12 training galige trainer aagi baralu ecchisutthiddene.
    aadare 3T trainig session ge baralu aagalilla. Paryaaya vyavasthe enaadaru iddare dayavittu thilisi.
    Thamma contact number thilisi haagu nanna number 9900911588/ Yelukoti rao/Vijayanagar

    ReplyDelete
  2. Namaskaara. Dhanyawaad for the kind wishes. Please get in touch with Shri Manjunath Kalamangi 94488-02111.

    ReplyDelete